Wednesday, July 29, 2009

ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.

ನೂರಾರು ಮತವಿಹುದು ಲೋಕದುಗ್ರಾಣದಲಿ
ಆರಿಸಿಕೋ ನಿನ್ನ ರುಚಿಗೊಪ್ಪುವುನದರೋಳ
ಸಾರದಡುಗೆಯ ವಿಚಾರದೊಲೆಯಲಿ ಮಾಡು
ಬೇರೆ ಮತಿ ಬೇರೆ ಮತ ಮಂಕುತಿಮ್ಮ.

ಅರ್ಥಾತ್: ನೂರಾರು ಮತಗಳು ಇವೆ ಲೋಕ ಎನ್ನುವ ಉಗ್ರಾಣದಲ್ಲಿ, ಅದರಲ್ಲಿ ಆರಿಸಿಕೋ ನಿನ್ನ ರುಚಿಗೆ ಒಪ್ಪುವುದನು. ಸಾರ ತುಂಬಿದ ಅಡುಗೆಯನ್ನು ವಿಚಾರ ಎಂಬ ಒಲೆಯಲಿ ಮಾಡು. ಬೇರೆ ಬೇರೆ ಮತಿ (ಬುದ್ದಿ) ಗೆ ಬೇರೆ ಬೇರೆ ಮತ (ಅಭಿಪ್ರಾಯ) ಇರುತ್ತದೆ.

No comments:

Post a Comment